ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು. ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ. ಬೆಲ್ಲ ಸಕ್ಕೆರೆಯಾಗು ದೀನ ದುರ್ಬಲರಿಂಗೆ. ಎಲ್ಲರೊಲೊಂದಾಗು ಮಂಕುತಿಮ್ಮ

Wednesday, 14 September 2011

ದೇವರು, Bigbang Theory ಮತ್ತು ಶಂಕರಾಚಾರ್ಯರು

ಹಿಂಗೆ ಒಂದಿನ ಕಛೇರಿಲಿ ಸಂಜೆ ಕೂತಿದ್ದೆ. ಸ್ವಲ್ಪ ಜಾಸ್ತಿನೇ  ಇತ್ತು ವರ್ಕು. ಸಂಜೆ ಐದುವರೆಗೆ ಬಿಳಿಜನ ಎಲ್ಲ ಜಾಗ ಖಾಲಿ ಮಾಡಿದ್ರಿಂದ ಎಲ್ಲ ಕಡೆ ನಿರವ ಮೌನ. ನಂಗೆ ಕೆಲಸ ಜಾಸ್ತಿ ಆದಾಗಲೇ  ದೇವ್ರು ನೆನಪಿಗೆ  ಬರೋದು. ಹೌದು ದೇವ್ರು ಅಂದ್ರೇನು? ನಾವೆಲ್ಲ ಯಾರು? ನಾನೇಕೆ ಇಲ್ಲಿ Cambridgeಗೆ  ಮಳವಳ್ಳಿಯಿಂದ ಬಂದು  ಕಂಪ್ಯೂಟರ್ ಮುಂದೆ ಕೂತು ಕೆಲಸ  ಮಾಡ್ತಾ ಇರೋದು? 

ನಾನು ತುಂಬಾ ಸಲ ಈ ಸೃಷ್ಟಿ ಹೆಂಗಾಯ್ತು ಅಂತ ತಲೆ ಕೆಡಿಸಿಕೊಂಡಿದ್ದೇನೆ. Well  , ನಾನೊಬ್ನೇ ಅಲ್ಲಾ, ಸಾವಿರಾರು ವರ್ಷಗಳ ಮಾನವನ ಇತಿಹಾಸ ನೋಡಿದ್ರೆ ದೇವರ ಹುಡುಕಾಟ, ಸೃಷ್ಟಿಯ ಮೂಲದ ಹುಡುಕಾಟ ಆಗ್ಲಿಂದೆ ನಡೀತಾ ಇರೋದು. ಹಂಗೆ ಇವತ್ತಿನವರೆಗೂ ಎಲ್ಲರಿಗು ಅರ್ಥಾನೂ ಆಗ್ದಿರೋದು. ಹಂಗೆ ನಂಗು ಅರ್ಥ ಆಗಿಲ್ಲ. ಆದ್ರೆ ನಂಗೆ ಒಂದು ನಂಬಿಕೆ ಇದೆ. ದೇವರಿದ್ದಾನೆ  ಅಂತ. ಹೆಂಗೆ ಅಂತೀರಾ, ಹೇಳ್ತಿನಿ ಕೇಳಿ.


ನಂಗೆ Bigbang theory ಮೇಲೆ ನಂಬಿಕೆ. ಈ ಸಿದ್ಧಾಂತದ ಪ್ರಕಾರ, ೧೩.೭ ಬಿಲಿಯನ್ ವರ್ಷಗಳ ಹಿಂದೆ, ಶೂನ್ಯದಲ್ಲಿ ಅಪಾರ  ಶಕ್ತಿ ಸುತ್ತುತ್ತ ಇತ್ತು. ಆಗ ಸೂರ್ಯ, ಭೂಮಿ ಯಾವುದು ಇರಲಿಲ್ಲ. ಬರೇ ಶೂನ್ಯ ಮತ್ತು ದಿಕ್ಕು ದೆಸೆ ಇಲ್ಲದೆ ಸುತ್ತುತ್ತಿದ್ದ ಶಕ್ತಿ. ಅದೇನಾಯ್ತೋ ಏನೋ? ಅಲ್ಲೊಂದು ಈ ಶಕ್ತಿಯ ಭಾರಿ ಸ್ಪೋಟ, ಈ ಸ್ಪೋಟದಿಂದ ವಸ್ತುವಿನ ಜನನ. ಅಲ್ಲಿಂದ ಶುರುವಾದ ಸೃಷ್ಟಿ ನಡೀತಾನೆ ಇದೆ.  



ನೀವು ಕೇಳಬಹುದು, ಶಕ್ತಿಯಿಂದ ವಸ್ತುವಿನ ಜನನ ಸಾಧ್ಯನಾ ಅಂತ? ಈಗ ನೋಡಿ, ನಿಮಗೆ ಅಟೋಮಿಕ್ ಫಿಸಿಕ್ಸ್ ಗೊತ್ತಿದ್ರೆ    E = mc ^2 ಗೊತ್ತಿರತ್ತೆ. ಈ ಸೂತ್ರದಲ್ಲಿ E ಅಂದ್ರೆ ಶಕ್ತಿ, m ಅಂದ್ರೆ ವಸ್ತು, c ಅಂದ್ರೆ ಬೆಳಕಿನ ವೇಗ. ಇದರ ಸಾರಾಂಶ "m ನಷ್ಟು ವಸ್ತುವಿನಿಂದ "mc ^2 " ನಷ್ಟು ಶಕ್ತಿ ಉತ್ಪಾದನೆ ಸಾಧ್ಯ. ಇದು ಅಟೋಮಿಕ್ ಬಾಂಬ್ ತಯಾರಿಕೆಯಲ್ಲಿ ಉಪಯೋಗಿಸಿರುವ ಮತ್ತು ಸಾಧಿತವಾಗಿರುವ ಸೂತ್ರ. One side of the equation is solved.  If the otherside is solved then Bigbang   theory is proved . I also firmly beleive every process in the mother nature is reversible. ಇನ್ನೊಂದು ಹತ್ತಿಪ್ಪತ್ತು ವರ್ಷಗಳಲ್ಲಿ Bigbang Theory ಪ್ರೂವ್ ಆಗಬಹುದು. Once its done , we can say ಶಕ್ತಿಯೇ ಮೂಲಪುರುಷ, ಸೃಷ್ಟಿಗೆ ಕಾರಣ ಎಂದು.  
 
So , ಪ್ರಪಂಚದ ಸೃಷ್ಟಿಗೆ ಕಾರಣವಾದ ಈ ಶಕ್ತಿನೇ ದೇವ್ರು. ಹಾಗೆ ಎಲ್ಲಾರು ದೇವರ ಭಾಗಾನೆ. ನಾನು ಕೂಡ. ಇದನ್ನೇ ಶಂಕರಾಚಾರ್ಯರು ಹೇಳಿರೋದು, "ಅಹಂ ಬ್ರಮ್ಹಾಸ್ಮಿ".

- by ವಿವೇಕ್ 

No comments:

Post a Comment